Sunday, January 31, 2021

ಮಕ್ಕಳ ಧನಿ -ಮಕ್ಕಳ ಧನಿ ಪೆಟ್ಟಿಗೆ ಪರಿಚಯ.

 *ಡಿಸೆಂಬರ್ 21 ರಿಂದ 26- 2020- ರ ವರೆಗೆ ಮಕ್ಕಳ ಧನಿ ಕಾರ್ಯಕ್ರಮದಡಿ ಮಕ್ಕಳಿಗೆ ಧನಿ ಪೆಟ್ಟಿಗೆ ಪರಿಚಯ.*    ಧನಿ ಪೆಟ್ಟಿಗೆ ಪರಿಚಯ ಮಾಡಲಾಯಿತು. ಧನಿ ಪೆಟ್ಟಿಗೆ ತಯಾರಿ ಮಾಡಲಾಯಿತು. ಮಕ್ಕಳು ಗುರುತಿಸಿದ ಸಮಸ್ಸೆಗಳ ಆಧಾರ ಮೇಲೆ iಸಂಭಂದಪಟ್ಟ ಇಲಾಖೆಗಳಿಗೆ ಪತ್ರ ಬರೆಯುವುದನ್ನ ಕಲಿ ಸಿಕೊಡಲಾಯಿತು. ಬರೆದ ಪತ್ರಗಳನ್ನು ಪರಿಶೀಲಿಸಿ ಸರಿಪಡಿಸಲಾಯಿತು. ಅಂತಿಮಗೋಳಿಸಿಸದ ಪತ್ರವನ್ನು ಓದಿ ಹೇಳಿ ಅದನ್ನು ಧನಿ ಪೆಟ್ಟಿಗೆಯಲ್ಲಿ ಹಾಕಲಾಯಿತು. ಉತ್ತಮ ಪತ್ರಗಳನ್ನು ಗುರುತಿಸಿ ಬಹುಮಾನ ನೀಡಲಾಗಿದೆ.  *ಧನಿ ಪೆಟ್ಟಿಗೆಯಲ್ಲಿ ಹಾಕಲಾಗಿರುವ ಶಾಲೆಗೆ ಸಂಭಂದಪಟ್ಟ ಮಕ್ಕಳ ಸಮಸ್ಸೆಗಳು*.   1. ನೀರಿನ ವ್ಯವಸ್ಥೆ ಶಾಲೆಯಲ್ಲಿ ಇಲ್ಲ. 2. ಶಾಲೆಯಲ್ಲಿ ತರಗತಿ ಕೋಣೆಗಳು ಇಲ್ಲ. 3. ನಮಗೆ ಶಾಲೆಯ ಮುಂದೆ ಮರಬೆಳೆಸುವುದಕ್ಕೆ ಜಾಗ ಇಲ್ಲ. 4. ವಿದ್ಯಾರ್ಥಿಗಳಿಗೆ ಶೌಚಾಲಯ  ಶಾಲೆಯಲ್ಲಿ ಇಲ್ಲ. 5. ನಮಗೆ ಆಟ ಆಡುವುದಕ್ಕೆ ಜಾಗ ಇಲ್ಲ. 6. ನಮ್ಮ ಶಾಲೆಗೆ ಕಟ್ಟಡ ಇಲ್ಲ. 7. ನಮ್ಮ ಶಾಲೆಯಲ್ಲಿ ಫ್ಯಾನ್ ಇಲ್ಲ. 8. ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳು ತಲುಪಬೇಕು. 9. ನಮ್ಮ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. 10. ಶಾಲೆಯಲ್ಲಿ ಗ್ರಂಥಾಲಯ ಇಲ್ಲ. 11. ಗ್ರಂಥಾಲಯ ಕೋಣೆ ಇಲ್ಲ. 12. ಶಾಲೆಗೆ ವಿದ್ಯುತ್ ವ್ಯವಸ್ಥೆ ಇಲ್ಲ. 13. ಶಾಲೆಯಲ್ಲಿ ಪ್ರಯೋಗ ಶಾಲೆ ಇಲ್ಲ. 14. ಸರಿಯಾಗಿ ಕುಳಿತುಕೊಳ್ಳಲು ಬೆಂಚ್ ಇಲ್ಲ. 15. ಧ್ವಜಾರೋಹಣ ಮಾಡುವುದಕ್ಕೆ ಸ್ಥಳ ಇಲ್ಲ.16. ಗಿಡ ಬೆಳೆಸುವುದಕ್ಕೆ ಜಾಗ  ಇಲ್ಲ.  17. ಮಳೆ ಬಂದಾಗ ಮತ್ತು ಬಿಸಿಲಿದ್ದಾಗಲೂ ಹೊರಗಡೆ ಕುಳಿತುಕೊಳ್ಳುತೇವೆ. ಶಾಲಾ ಕಟ್ಟಡ ಇಲ್ಲದ ಕಾರಣ. 18. ಶಾಲೆಯಲ್ಲಿ ಸ್ವಚ್ಛತೆ ಕಾಪಾಡಬೇಕು. 19. ಶಾಲೆಗೆ ಬರಿ 4 ಕೋಣೆಗಳು ಮಾತ್ರ ಇವೆ. 20. ಗ್ರಂಥಾಲಯ ಸರಿಯಾಗಿ ಇಲ್ಲ. 21. ನನಗೆ ಪ್ರಶ್ನೆ ಕೇಳುವುದಕ್ಕೆ ಭಯ ಆಗುತ್ತೆ -ಅನಾಮಧೇಯ. 22. ನೋಡಲು ನಮಗೆ ದೂರದರ್ಶನ (T. V) ಇಲ್ಲ-ಬಸಪ್ಪ 8ನೇ ತರಗತಿ. 23. ನಮ್ಮ ಊರಿನಲ್ಲಿ ವಠಾರ ಶಾಲೆ ನೆಡಸಬೇಕಾಗಿದೆ. 24. ನಮ್ಮ ಶಾಲೆಯ ಮುಂದೆ ಗಟರ್ ಇದೆ. *25. ಒಟ್ಟಾರೆ ನಮ್ಮ ಊರಿಗೆ ಹೊಸ ಶಾಲಾ ಕಟ್ಟಡವನ್ನು ಕಟ್ಟಿಸಬೇಕು- ಜಯಶ್ರೀ ಸಿ 6ನೇ, ರೇಶ್ವರಾಜಮ್ಮ 6ನೇ,* *ಕಲ್ಪನಾ 7ನೇ ಮತ್ತು ಬಸಪ್ಪ ಮೊಗ್ಲಪ್ಪ 8ನೇ ತರಗತಿ.*

Saturday, January 30, 2021

ಓದು ಬೆಳಕು ಗ್ರಂಥಾಲಯ ಸದ್ ಬಳಕೆ.

 *" ಮಕ್ಕಳ ಸ್ನೇಹಿ  ಗ್ರಾಮ* *ಪಂಚಾಯತ ಅಭಿಯಾನ* "  ಕರ್ನಾಟಕ ಸರ್ಕಾರ  ಅಪರ ಆಯುಕ್ತರ ಕಚೇರಿ, ಸಾರ್ವಜನಿಕ  ಶಿಕ್ಷಣ  ಇಲಾಖೆ, ಕಲಬುರಗಿ ರವರ  ದಿನಾಂಕ  12.10.2020ರ ಪತ್ರದಲ್ಲಿ ತಿಳಿಸಿರುವಂತೆ ಸರಕಾರಿ  ಹಿರಿಯ ಪ್ರಾಥಮಿಕ  ಶಾಲೆ  ಮಲ್ಕಪಲ್ಲಿ ಸೇಡಂ ತಾಲ್ಲೂಕು 'ಓದುವ  ಬೆಳಕು ' ಕಾರ್ಯಕ್ರಮವನ್ನು ನೆಡೆಸುತಿದ್ದು; ಅದರಲ್ಲಿ  ಮೊದಲನೇ ವಾರ ಅಂದರೆ  ನವೆಂಬರ 14 ರಿಂದ 21 ರ  ವರಗೆ - 2020 ನೇ  ಇಸವಿಯಂದು- "ಓದುವ ಬೆಳಕು' ಗ್ರಂಥಾಲಯ ಸದ್ ಬಳಕೆ " ಎಂಬ ವಿಷಯದಲ್ಲಿ ಚಟುವಟಿಕೆ ಗಳನ್ನು ಆಯೋಜಿಸಲಾಯಿತು.   ಮೊದಲಿಗೆ ಶಾಲಾಹಂತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಮಕ್ಕಳನ್ನು  'ಓದುವ  ಬೆಳಕು ' ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಎಲ್ಲಾ ಮಕ್ಕಳನ್ನು  ನೋಂದಾಯಿಸಿ ನಮ್ಮ ಶಾಲೆಯ ಗ್ರಂಥಾಲಯದಿಂದ ಮಕ್ಕಳಿಗೆ  ಪುಸ್ತಕ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಮಕ್ಕಳಿಂದ  ಅಂದೇ ಪುಸ್ತಕ ಓದಿಸಲಾಯಿತು. ನಮ್ಮ  ಶಾಲೆಯ 'ಬ್ಲಾಗ್' ಇರುವುದುನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಗ್ರಂಥಾಲಯದಿಂದ ಪಡೆದ ಪುಸ್ತಕಗಳನ್ನು ಶಿಕ್ಷಕರು ಮಕ್ಕಳು  ಪಡೆದ ಪುಸ್ತಕಗಳನ್ನೇ ಓದಿ ತೋರಿಸಿ ಪುಸ್ತಕ ಓದುವ ಬಗೆ ಯನ್ನು ಕಲಿಸಿ ಕೊಡಲಾಯಿತು.  ಮಕ್ಕಳಿಗೆ ಪುಸ್ತಕ ಓದಲು ಹೇಳಿ ಓದಿದ ವಿಷಯಗಳ ಸಂಗ್ರಹ, ಮಕ್ಕಳಲ್ಲಿ ಪರಸ್ಪರ ಚರ್ಚೆ ಇದ್ದಕ್ಕೆ ಶಿಕ್ಷಕರು ಸಹಕರಿಸಿ ಸಂಗ್ರಹಿತ ಅಂಶಗಳನ್ನು ಪಟ್ಟಿಮಾಡಲಾಯಿತು ಮತ್ತು ಪಟ್ಟಿಮಡಿದ ವಿಷಯಗಳನ್ನು  ವಿವಿಧ ರೀತಿಯಲ್ಲಿ -ತಂತ್ರಜ್ಞಾನವನ್ನೂ ಸಹ ಬಳಸಿ - ಧಾಖಲಿಸಲಾಯಿತು. ಮಕ್ಕಳು ಓದಿದ ಪುಸ್ತಕದ ಆಧಾರದ ಮೇಲೆ ರಸ ಪ್ರಶ್ನೆ, ಭಾಷಣ, ಆಶುಭಾಷಣ ಮತ್ತು ಓದುವ ಸ್ಪರ್ಧೆಗಳನ್ನೂ ಸಹ ಏರ್ಪಡಿಸಲಾಯಿತು.j ಸ್ಪರ್ಧೆಯಲ್ಲಿ  ಜಯಗಳಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.   *ಪುಸ್ತಕ* *ಓದಿನಲ್ಲಿ*  *ಪಟ್ಟಿ ಮಾಡಿದ* *ಮುಖ್ಯ ಅಂಶಗಳು* - 1. ಪ್ರಸಿದ್ಧ ವ್ಯಕ್ತಿಗಳ  ಜೀವನದ ಸಾಧನೆ. 2.    ಕಥೆ ಹೇಳುವುದು ಮತ್ತು ಕೇಳುವುದು. 3. ಪ್ರಬಂಧ ಬರವಣಿಗೆ -ಸ್ವರೂಪ ಮತ್ತು ಮಹತ್ವ. 4. ಬರವಣಿಗೆ ರೂಪು ರೇಷಗಳನ್ನು ಕಂಡುಕೊಳ್ಳಲಾಯಿತು. 4. ವಾಕ್ಯ ರಚನಾ ಚಿನ್ಹೆಗಳನ್ನು ಕಂಡುಹಿಡಿದು ಭಾಷೆಯ ಬಳಕೆ ಯಲ್ಲಿ  ಅವುಗಳ ಮಹತ್ವ ಅರ್ಥಮಾಡಲಾಯಿತು. 5. ಮಕ್ಕಳ  ಕಲಿಕೆಗೆ ನಿಗಧೀಯಾಗಿರುವ ತರಗತಿವಾರು ಎಲ್ಲಾ ವಿಷಯಗಳ ಆಧಾರದ ಮೇಲೆ ಗ್ರಂಥಾಲಯ ಪುಸ್ತಕಗಳಲ್ಲಿ ಓದಿ  ತಿಳಿದುಕೊಳ್ಳಲಾಯಿತು. 6. ಜೀವನ  ಕೌಶಲಗಳನ್ನು ಓದಿ ತಿಳುದು ಕೊಳ್ಳಲಾಯಯಿತು. 7. ಪುಸ್ತಕ ಓದಿನಲ್ಲಿ ಅಭ್ಯಾಸ ಮಾಡಲಾಯಿತು. 8. ಭಾಷಾ ಕಲಿಕಾ ಕೌಷಲ್ಯಗಳನ್ನು -ಕೇಳುವುದು, ಮಾತನಾಡುವುದು, ಓದುವುದು  ಮತ್ತು ಬರೆಯುವುದು- ಇವುಗಳನ್ನು ಕಲಿಯಲಾಯಿತು.