*" ಮಕ್ಕಳ ಸ್ನೇಹಿ ಗ್ರಾಮ* *ಪಂಚಾಯತ ಅಭಿಯಾನ* " ಕರ್ನಾಟಕ ಸರ್ಕಾರ ಅಪರ ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ ರವರ ದಿನಾಂಕ 12.10.2020ರ ಪತ್ರದಲ್ಲಿ ತಿಳಿಸಿರುವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಪಲ್ಲಿ ಸೇಡಂ ತಾಲ್ಲೂಕು 'ಓದುವ ಬೆಳಕು ' ಕಾರ್ಯಕ್ರಮವನ್ನು ನೆಡೆಸುತಿದ್ದು; ಅದರಲ್ಲಿ ಮೊದಲನೇ ವಾರ ಅಂದರೆ ನವೆಂಬರ 14 ರಿಂದ 21 ರ ವರಗೆ - 2020 ನೇ ಇಸವಿಯಂದು- "ಓದುವ ಬೆಳಕು' ಗ್ರಂಥಾಲಯ ಸದ್ ಬಳಕೆ " ಎಂಬ ವಿಷಯದಲ್ಲಿ ಚಟುವಟಿಕೆ ಗಳನ್ನು ಆಯೋಜಿಸಲಾಯಿತು. ಮೊದಲಿಗೆ ಶಾಲಾಹಂತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಮಕ್ಕಳನ್ನು 'ಓದುವ ಬೆಳಕು ' ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಎಲ್ಲಾ ಮಕ್ಕಳನ್ನು ನೋಂದಾಯಿಸಿ ನಮ್ಮ ಶಾಲೆಯ ಗ್ರಂಥಾಲಯದಿಂದ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಮಕ್ಕಳಿಂದ ಅಂದೇ ಪುಸ್ತಕ ಓದಿಸಲಾಯಿತು. ನಮ್ಮ ಶಾಲೆಯ 'ಬ್ಲಾಗ್' ಇರುವುದುನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಗ್ರಂಥಾಲಯದಿಂದ ಪಡೆದ ಪುಸ್ತಕಗಳನ್ನು ಶಿಕ್ಷಕರು ಮಕ್ಕಳು ಪಡೆದ ಪುಸ್ತಕಗಳನ್ನೇ ಓದಿ ತೋರಿಸಿ ಪುಸ್ತಕ ಓದುವ ಬಗೆ ಯನ್ನು ಕಲಿಸಿ ಕೊಡಲಾಯಿತು. ಮಕ್ಕಳಿಗೆ ಪುಸ್ತಕ ಓದಲು ಹೇಳಿ ಓದಿದ ವಿಷಯಗಳ ಸಂಗ್ರಹ, ಮಕ್ಕಳಲ್ಲಿ ಪರಸ್ಪರ ಚರ್ಚೆ ಇದ್ದಕ್ಕೆ ಶಿಕ್ಷಕರು ಸಹಕರಿಸಿ ಸಂಗ್ರಹಿತ ಅಂಶಗಳನ್ನು ಪಟ್ಟಿಮಾಡಲಾಯಿತು ಮತ್ತು ಪಟ್ಟಿಮಡಿದ ವಿಷಯಗಳನ್ನು ವಿವಿಧ ರೀತಿಯಲ್ಲಿ -ತಂತ್ರಜ್ಞಾನವನ್ನೂ ಸಹ ಬಳಸಿ - ಧಾಖಲಿಸಲಾಯಿತು. ಮಕ್ಕಳು ಓದಿದ ಪುಸ್ತಕದ ಆಧಾರದ ಮೇಲೆ ರಸ ಪ್ರಶ್ನೆ, ಭಾಷಣ, ಆಶುಭಾಷಣ ಮತ್ತು ಓದುವ ಸ್ಪರ್ಧೆಗಳನ್ನೂ ಸಹ ಏರ್ಪಡಿಸಲಾಯಿತು.j ಸ್ಪರ್ಧೆಯಲ್ಲಿ ಜಯಗಳಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. *ಪುಸ್ತಕ* *ಓದಿನಲ್ಲಿ* *ಪಟ್ಟಿ ಮಾಡಿದ* *ಮುಖ್ಯ ಅಂಶಗಳು* - 1. ಪ್ರಸಿದ್ಧ ವ್ಯಕ್ತಿಗಳ ಜೀವನದ ಸಾಧನೆ. 2. ಕಥೆ ಹೇಳುವುದು ಮತ್ತು ಕೇಳುವುದು. 3. ಪ್ರಬಂಧ ಬರವಣಿಗೆ -ಸ್ವರೂಪ ಮತ್ತು ಮಹತ್ವ. 4. ಬರವಣಿಗೆ ರೂಪು ರೇಷಗಳನ್ನು ಕಂಡುಕೊಳ್ಳಲಾಯಿತು. 4. ವಾಕ್ಯ ರಚನಾ ಚಿನ್ಹೆಗಳನ್ನು ಕಂಡುಹಿಡಿದು ಭಾಷೆಯ ಬಳಕೆ ಯಲ್ಲಿ ಅವುಗಳ ಮಹತ್ವ ಅರ್ಥಮಾಡಲಾಯಿತು. 5. ಮಕ್ಕಳ ಕಲಿಕೆಗೆ ನಿಗಧೀಯಾಗಿರುವ ತರಗತಿವಾರು ಎಲ್ಲಾ ವಿಷಯಗಳ ಆಧಾರದ ಮೇಲೆ ಗ್ರಂಥಾಲಯ ಪುಸ್ತಕಗಳಲ್ಲಿ ಓದಿ ತಿಳಿದುಕೊಳ್ಳಲಾಯಿತು. 6. ಜೀವನ ಕೌಶಲಗಳನ್ನು ಓದಿ ತಿಳುದು ಕೊಳ್ಳಲಾಯಯಿತು. 7. ಪುಸ್ತಕ ಓದಿನಲ್ಲಿ ಅಭ್ಯಾಸ ಮಾಡಲಾಯಿತು. 8. ಭಾಷಾ ಕಲಿಕಾ ಕೌಷಲ್ಯಗಳನ್ನು -ಕೇಳುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು- ಇವುಗಳನ್ನು ಕಲಿಯಲಾಯಿತು.
No comments:
Post a Comment