ಉಳುವ ರೈತನ ನೇಗಿಲವಾಗುವುದು, ನೇಗಿಲ ಕಟ್ಟಿ ಎಳೆಯುವ ಜೋಡಿ ಎತ್ತುಗಳಾಗುವುದು, ಬೀಜವ ಬಿತ್ತುವ ಹೆಣ್ಣಾಗುವುದು, ಸುಗ್ಗಿಯ ಹಬ್ಬವಾಗುವುದು ಕವನ ll ವಸಂತ ಋತುವಿನ ಗಾನ ಕೋಗಿಲೆಯಾಗುವುದು, ಚಿಗುರುವ ಗಿಡ ಮರದ ಎಲೆಗಳಾಗುವುದು, ಎಲೆಗಳ ಮದ್ಯೆ ಮೂಡಿಬರುವ ಮೊಗ್ಗಾಗುವುದು, ಹಕ್ಕಿಪಕ್ಷಿಗಳು ಚಿಲಿಪಿಲಿಗುಟ್ಟುವ ಕಲರವಾ ಆಗುವುದು ಕವನll ಕಾರ್ಮೋಡಗಳಿಂದ ಸುರಿವ ಮಳೆ ಹನಿಗಳಾಗುವುದು ನದಿಗಳು ತುಂಬಿ ಬೋರ್ಗರೆವಾ ಜಲಪಾತಗಳಾಗುವುದು, ನದಿಗಳಿಗೆ ಕಟ್ಟಿರುವ ಆಣೆಕಟ್ಟುಗಳು ಆಗುವುದು, ಅಣೆಕಟ್ಟುಗಳಲ್ಲಿನ ನೀರಾಗುವುದು ಕವನ ll ನಿಂತ ಮಳೆ ನೀರಲ್ಲಿ ವಟಗುಟ್ಟುವ ಕಪ್ಪೆಗಳಂತೆ, ಶಾಲೆಯಲ್ಲಿ ಯಾವಾಗಲೂ ಕಿರುಚುವ ಮಕ್ಕಳಂತೆ, ನಗರ ಪಟ್ಟಣಗಳಲ್ಲಿನ ವಾಹನಗಳ ಕೀಗುಟ್ಟುವ ಶಬ್ಧದಂತೆ, ತಾಯ ಮಡಿಲಲ್ಲಿ ಅಳುವ ಮಗುವಿನಂತೆ ಕವನll ವೈಧ್ಯಾಲಯಗಳಲ್ಲಿ ರೋಗಿಗಳ ರೋಧವಾಗುತ್ತದೆ, ವ್ಯಧ್ಯರು ನೀಡುವ ಸೂಚನೆಯಗುತ್ತದೆ, ಸಾವಾದಾಗ ರಾಮ... ರಾಮ... ಎನ್ನುವ ಶೋಕವಾಗುತ್ತದೆ, ಸತ್ತಮೇಲೆ ಸತ್ತವರ ಸ್ಮರಣೆಯಾಗುತ್ತದೆ ಕವನ ll ಚೈತ್ಯಾಲಾಯಗಳಲ್ಲಿನ ಸಂಗೀತ ಸುಧೆಯಾಗುತ್ತದೆ, ವಾಸ್ತುಶಿಲ್ಪಕಲಾ ವೈಭವಾಗುತ್ತದೆ, ರಾಜಾಪ್ರಭುತ್ವದ ವೈಖರಿಯ ಬಣ್ಣನೆಯಗುತ್ತದೆ, ಯುಗಗಳ ನಾಮಸ್ಮರಣೆಯಾಗುತ್ತದೆ ಕವನ ll