Friday, April 2, 2021

ಕವನ -ಮರ, ದೇವರಾಜು, ಸ, ಶಿ.

 ಧರೆಯ ಹೊಡಲಲ್ಲಿ ನೀನೊಂದು ಪುಟ್ಟ ಮರ. ನಿನ್ನ ಮಯ್ಯ ತುಂಬಾ ಬರಿ ರೆಂಬೆ ಕೊಂಬೆಗಳು. ರೆಂಬೆ ಕೊಂಬೆಗಳಾಲೆಲ್ಲ ಚಿಲಿಪಿಲಿಗುಟ್ಟುವ ಹಕ್ಕಿ ಪಕ್ಷಿಗಳು. ಚಿಲಿಪಿಲಿಗುಟ್ಟುವ ಹಕ್ಕಿ ಪಕ್ಷಿಗಳ ಕಲರವ, ಜೊತೆಗೆ ಹಕ್ಕಿ ಪಕ್ಷಿಗಳು ಹರಾಡುವ ಮೆರುಗು, ಗಾಳಿಯಲ್ಲಿ ತೇಲಾಡುವ ನಿನ್ನ ಹಚ್ಚ ಹಸಿರಿನ   ಎಲೆಗಳು ಪ್ರಕೃತಿ ಸೌಂಧರ್ಯಕ್ಕೆ ಪ್ರತಿ ಗಳಿಗೆಯಲ್ಲೂ ಮುಧ ನೀಡುವಂತಿದೆ.                                                                  ವಸಂತ ಕಾಲದ ಗಾನ ಕೋಗಿಲೆ, ಕಣ್ಮನ ಸೆಳೆಯುವ ಜನಸಂದಣಿಯ ಗಲಾಟೆ ಗದ್ದಲ, ನಡುವೆ ವಾಹನಗಳ ಶಬ್ಧ, ರಸ್ತೆಯ ಇಕ್ಕೆಲಗಳಲ್ಲಿ ನಾನಾರೀತಿಯ ವಸ್ತುಗಳು, ಹಣ್ಣು, ತರಕಾರಿಗಳು, ನಾನಾರೀತಿಯ ಸೊಬಗು, ನೋಡಲು ಎರಡು ಕಣ್ಣುಗಳು ಸಾಲದು, ಇವೆಲ್ಲಕ್ಕೂ ಮಿಗಿಲಾಗಿ ಸಂತೆಗೆ ಬಂದು ಹೋಗುವ ಜನಕೆ ಬಿಸಿಲ ಬೇಗೆಯಿಂದ ಸುಧಾರಿಸಿಕೊಳ್ಳಲು   ನೀನು ನೆರಳಾಗಿರುವೆ. ನಿನ್ನ ಜೀವನ ಅಮರವಾದದ್ದು ಹಾಗೂ ಅಮರವಾಗಿರಲಿ. 

No comments:

Post a Comment