"ಕವನ". ಕಾಡು ಮೇಡ ಅಲೆಸುವುದು, ಊರು ಕೇರಿ ತಿರುಗಿಸುವುದು, ಬೆಟ್ಟ ಗುಡ್ಡಗಳ ಮೇಲೆ ಕುಳ್ಳಿರಿಸುವುದು, ನಿಂತಲ್ಲಿ ನಿಲ್ಲಲಾರದೆ ನಡೆದಾಡಿಸುವುದು, ಕವನ ll ಕುಂತಲ್ಲೇ ಕೂಪದಲ್ಲಿನ ಮಂಡೂಕವಾಗಿಸುತ್ತದೆ, ನಿಂತಲ್ಲೇ ನೆಟ್ಟಿರುವ ಕಲ್ಲಿನ ಕಂಭವಾಗಿಸುತ್ತದೆ, ಮಲಗಿದಲ್ಲೇ ಬಾನಂಗಳದಲ್ಲಿ ಬರುವ ಚಂದಿರವಾಗಿಸುತ್ತದೆ, ನಿದ್ರೆಯಿಂದೆದ್ದು ಕತ್ತಲೆಯ ಸರಿಸಿ ಬೆಳಕಿನಡೆಗೆನಡೆಸುತ್ತದೆ ಕವನ ll. ಕಾನನದ ಕಾಡಗಿಚ್ಚು ಮರವ ಸುಡುತ್ತಿರಲು, ನದಿಯ ನೀರು ಮರಕ್ಕೆ ನೀರುಣಿಸುತ್ತಿರಲು, ಪ್ರಾಣಿ ಸಂಕುಲಗಳು ತಮ್ಮ ಹೊರೆಯ ಅರಿಯುತ್ತಿರಲು, ಪ್ರಕೃತಿಯ ಸೊಬಗನ್ನು ವರ್ಣಿಸುತ್ತದೆ ಕವನ ll. ಬರೆವ ಲೇಖನಿಗೆ ಬಣ್ಣ ಬಣ್ಣದ ಚಿತ್ತಾರವಾಗುತ್ತದೆ, ಹಾಡುವ ಹಾಡಿಗೆ ಆಹಾರವಾಗುತ್ತದೆ, ಕೇಳುವ ಗೀತೆಗೆ ವೀಣೆಯಾಗುತ್ತದೆ, ನೋಡುವ ಕಣ್ಣಿಗೆ ಮುನ್ನೋಟವಾಗುತ್ತದೆ, ಕವನ ll. ಮುಡಿವ ಹೆಣ್ಣಿಗೆ ಹೂವಾಗುವುದು, ಮದುವೆ ಮನೆಯ ಆಮಂತ್ರಣವಾಗುವುದು, ಮಧುಮಗಳ ಲಜ್ಜೆಯಾಗುವುದು, ವಧುವರರ ಪ್ರತಿಜ್ಞೆಯಾಗುವುದು ಕವನ ll. ಹಬ್ಬಗಳ ಔತಣವಾಗುವುದು, ಪೂಜೆಗೆ ಬೇಕಾಗುವ ಸಾಮಗ್ರಿಗಳಾಗುವುದು, ಸಾಧುಸಂತರು ಜಪಿಸುವ ಮಂತ್ರ ಪಠಣೆಯಾಗುವುದು, ದೇವರು ಕೊಡುವ ವರವಾಗುವುದು ಕವನ ll. ಈ ಕವನ 'ಕವನ'ದ ಬಗ್ಗೆಯೇ ಬರೆಯಲಾಗಿದೆ. ದೇವರಾಜು ಸಹ ಶಿಕ್ಷಕರು, ಮಲ್ಕಪಲ್ಲಿ GHPS.
No comments:
Post a Comment