ಸ್ವಾತಂತ್ರ್ಯ ಭಾರತ ನಿರ್ಮಿಸೋಣ ಬನ್ನಿ ಸ್ವಾತಂತ್ರ್ಯ ಭಾರತ ನಿರ್ಮಿಸೋಣ ಬನ್ನಿ ll
ಸಹ್ಯಾದ್ರಿಯ ತಪ್ಪಲಲ್ಲಿ, ಹಿಮಾಲಯಗಳ ಸಾಲಿನಲ್ಲಿ, ಪಶ್ಚಿಮ ಘಟ್ಟಗಳ ಸೊಬಗಿನಲ್ಲಿ, ಕನ್ಯಾಕುಮಾರಿಯ ಕಲರವದಲ್ಲಿ, ಸ್ವಾತಂತ್ರ್ಯಭಾರತ ನಿರ್ಮಿಸೋಣ ಬನ್ನಿ ll
ಕಾವೇರಿಯ ಕಲರವಾ, ಕಾಳಿಯ ರೌದ್ರಾವತಾರ, ಗಂಗೆ ತುಂಗೆ ಯಮುನಾಗಳ ರಮಣೀಯ ನೋಟ, ನರ್ಮದಾ ಕೃಷ್ಣ ಭೀಮಾಗಳ ಬಿಗುಮಾನ, ಘಟಪ್ರಬಾ ಮಲಪ್ರಬಾಗಳ ಮಹಾ ಸಂಗಮಗಳ ಮುಷ್ಟಿಯಲ್ಲಿ, ಸ್ವಾತಂತ್ರ್ಯ ಭಾರತ ನಿರ್ಮಿಸೋಣ ಬನ್ನಿ ll
ಶಿಲ್ಪಾ ಕಲೆಗಳ ನೆಲೆಬೀಡಲ್ಲಿ, ಸರಿಗಮಪ ಸಂಗೀತ ಸಾಲುಗಲ್ಲಿ, ಸುಗ್ಗಿಯ ಕ್ಷಣಗಳಲ್ಲಿ, ಪುರಾಣಗಳ ಪುಣ್ಯಸ್ಮರಣೆಗಳಲ್ಲಿ, ಸ್ವಾತಂತ್ರ್ಯ ಭಾರತ ನಿರ್ಮಿಸೋಣ ಬನ್ನಿ ll
ಭೇದ ಭಾವಗಳ ನಿರ್ಮೂಲನೆಯಲ್ಲಿ, ಮಹಿಳೆಯರ ಸಬಲೀಕರಣದಲ್ಲಿ, ಜನಸಾಮಾನ್ಯರ ಹಸಿವು ನೀಗಿಸುವುದರಲ್ಲಿ, ಬಾಲಕಾರ್ಮಿಕತೆ , ಬಾಲ್ಯವಿವಾಹಗಳ ನಿರ್ಮೂಲನೆಯಲ್ಲಿ, ಸ್ವಾತಂತ್ರ್ಯ ಭಾರತ ನಿರ್ಮಿಸೋಣ ಬನ್ನಿll
ಅಂತರ್ಜಾಲದ ಶಕ್ತಿಯನ್ನು ಇಡೀ ವಿಶ್ವಕ್ಕೇ ಸಾರುತ್ತಾ, ಶಿಕ್ಷಣದ ಬೆಳವಣಿಗೆಯನ್ನ ಸದಾ ಕಾಣುತ್ತಾ, ರೈತನ ಬವಣೆಯನ್ನ ನೀಗಿಸುತ್ತಾ, ಕರೋನದಂತ ಕಾಯಿಲೆಗಳನ್ನು ತೊಲಗಿಸುತ್ತಾ, ಸ್ವಾತಂತ್ರ್ಯ ಭಾರತ ನಿರ್ಮಿಸೋಣ ಬನ್ನಿ ll
ನಾಡು ನುಡಿ ಸ್ಮರಿಸುತ್ತಾ, ಅಮ್ಮ ಕಲಿಸಿದ ತೊದಲು ಮಾತನ್ನ ನೆನೆಯುತ್ತಾ, ಭೂಮಿತಾಯಿಯ ಹಾರೈಕೆ ಬೇಡುತ್ತಾ, ಓಂ ನಮಾ ಶಿವಾಯವಾ ಜಪಿಸುತ್ತಾ, ಸ್ವಾತಂತ್ರ್ಯ ಭಾರತ ನಿರ್ಮಿಸೋಣ ಬನ್ನಿ ll
No comments:
Post a Comment